ಬರಹಗಾರ್ತಿಯಾಗಿ ಯಶಸ್ವಿಯಾಗಿರುವ ಕಡೆಯೆಲ್ಲಾ ಮಹಿಳೆ ಭಾಷೆಯನ್ನು ಪುರುಷರಿಗಿಂತ ಯಶಸ್ವಿಯಾಗಿ ಬಳಸಿದ್ದಾಳೆ ಎಂದು ಸಾ.ಶಿ. ಮರುಳಯ್ಯ ಅಭಿಪ್ರಾಯಪಟ್ಟಿದ್ದಾರೆ. ಸೃಷ್ಟಿ ಪ್ರಕಾಶನದ ’ಮಿಣಮಿಣ ಚೀಣಾ’ ಪುಸ್ತಕ ಬಿಡುಗಡೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಕನ್ನಡ ಸಾಹಿತ್ಯದ ಇತ್ತೀಚಿನ ಬೆಳವಣಿಗೆ ಆಶಾದಾಯಕವಾಗಿದೆ. ಮಹಿಳೆಯರು ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಲ್ಪನಿಕ ಬರವಣಿಗೆಗಳಿಗಿಂತ, ವಾಸ್ತಾವಾಂಶವನ್ನು ಒಳಗೊಂಡ ಆತ್ಮಕಥೆ, ಪ್ರವಾಸ ಕಥನಗಳು ಇಂದಿನ ಅಗತ್ಯಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಂಶೋಧಕ ಚಿದಾನಂದಮೂರ್ತಿಯವರು ಚೀನಾದ ಆಕ್ರಮಣಶಿಲತೆಯ ಬಗ್ಗೆ ಆತಂಕಪಟ್ಟರೂ, ಅವರ ದುಡಿಮೆ ನಮಗೆ ಪಾಠವಾಗಬೇಕು. ಪ್ರವಾಸಗಳಲ್ಲಿ ನೋಡುವುದಕ್ಕಿಂತಲೂ ಕಾಣುವುದು ಮುಖ್ಯವಾಗಬೇಕು. ಹಂಪಿಯನ್ನು ನೋಡುವುದಕ್ಕಿಂತ ಕಾಣುವುದರಲ್ಲಿ ಹೆಚ್ಚು ಸತ್ಯಾಂಶವಿದೆ ಎಂದು ಹೇಳಿದರು. ಚೀನಾದ ಏಳಿಗೆಗೆ ಅಲ್ಲಿ ಮತಾಂತರ ಇಲ್ಲದಿರುವುದೂ ಒಂದು ಕಾರಣ ಎಂದು ಅಭಿಪ್ರಾಯಪಟ್ಟರು.
ಲೇಖಕಿ ಶಾಂತಾನಾಗರಾಜ್, ತ್ರಿವೇಣಿ ಶಿವಕುಮಾರ್ ಮತ್ತು ಪ್ರಕಾಶಕ ಸೃಷ್ಟಿ ನಾಗೇಶ್ ಉಪಸ್ಥಿತರಿದ್ದರು. ಬಿ.ಆರ್. ಸತ್ಯನಾರಾಯಣ ಕಾರ್ಯಕ್ರಮ ನಡೆಸಿಕೊಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ