ಸ್ತ್ರೀವಾದಿ ಚಿಂತನೆಗಳು

ಸ್ತ್ರೀವಾದಿ ಚಿಂತನೆಗಳು
ಪ್ರೊ. ಕೇಶವಶರ್ಮ ಅವರ ಸಮಗ್ರ ಸ್ತ್ರೀವಾದಿ ಲೇಖನಗಳು
ಸಂಪಾದಕರು
ಡಾ. ಹಾ.ಮ. ನಾಗರ್ಜುನ
ಬೆಲೆ 450/-


 ತಮ್ಮ ಸಾಹಿತ್ಯಿಕ ಲೋಕದ ಬರವಣಿಗೆಯಲ್ಲಿ ಗಂಡು-ಹೆಣ್ಣು, ಮಡಿ-ಮೈಲಿಗೆ, ಪವಿತ್ರ-ಅಪವಿತ್ರವೆಂಬ ಸರಳ ವರ್ಗೀಕರಣದ ಮಾದರಿಯನ್ನು ಶರ್ಮ ಅವರು ನಿರಾಕರಿಸಿ ಬರೆದಿದ್ದಾರೆ. ಇವರು ಸಾಹಿತ್ಯದ ಸಂದರ್ಭದಲ್ಲಿ ಸ್ಪೃಶ್ಯ-ಅಸ್ಪೃಶ್ಯವೆಂಬ ದ್ವಂದ್ವ ನೀತಿಯನ್ನು ನಿರಾಕರಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
ಶರ್ಮ ಅವರು ಸ್ತ್ರೀವಾದಿ ವಿಮರ್ಶೆ ಜೊತೆಯಲ್ಲಿಂಯೇ ವಿಮರ್ಶಾಪ್ರಸ್ಥಾನದಲ್ಲಿ ತುಂಬಾ ಖ್ಯಾತಿ ಹೊಂದಿದ ಸಾಹಿತ್ಯ ವಿಮರ್ಶೆಯ ಕೆಲವು ಸಿದ್ಧಾಂತಗಳ ರಚನೆಗೆ ಕಾರಣೀಭೂತರಾದರು. ಅಂತಹ ಮುಖ್ಯವಾದ ಸಾಹಿತ್ಯ ವಿಮರ್ಶೆಯನ್ನು ಕನ್ನಡಕ್ಕೆ ಮೊದಲು ಪರಿಚಯಿಸಿದವರು ಇವರೇ ಆಗಿದ್ದು, ಇರು ಸಾಹಿತ್ಯ ವಿಮರ್ಶಾ ಪ್ರಸ್ಥಾನವನ್ನು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯೊಂದಿಗೆ ಅಧ್ಯಯನ ನಡೆಸಿ, ಕನ್ನಡಕ್ಕೆ ಪರಿಚಯಿಸಿದ ವಿಮರ್ಶೆಯೆಂದರೆ ಅದುವೆ ರಚನಾವಾದ, ನಿರಚನವಾದ, ಸಿದ್ಧಾಂತಗಳಾಗಿವೆ.
ಹಾಗೆಯೇ ಮಾರ್ಕ್ಸ್‌ವಾದಿ ವಿಮರ್ಶೆಯನ್ನು ಬರೆದವರಲ್ಲಿ ಶರ್ಮ ಅವರು ಮೊದಲಿಗರು. ಹೀಗೆ ಹಲವು ಹತ್ತು ವಿಮರ್ಶಾ ಪ್ರಸ್ಥಾನಗಳನ್ನು ಬರೆದು, ಪರಿಚಯಿಸಿದ ಶರ್ಮ ಅವರ ಬಹುತೇಕ ಬರಹಗಳು ಲೇಖನಗಳ ಮೂಲಕ ವಿಭಿನ್ನವಾದ ಸಾಹಿತ್ಯಕ ಪತ್ರಿಕೆಗಳಿಂದ ಹಿಡಿದು ಪರಾಮರ್ಶನ ಗ್ರಂಥಗಳಲ್ಲಿ ಪ್ರಕಟವಾಗಿದ್ದವು. ಈ ರೀತಿಯಾಗಿ ಚದುರಿಹೋದ ಅವರ ಎಲ್ಲ ಲೇಖನಗಳನ್ನು ಇಲ್ಲಿ ಒಂದು ಕಟ್ಟಿಗೆ ತರುವ ಹಿನ್ನೆಲೆಯಲ್ಲಿ, ಪ್ರಧಾನವಾಗಿ ಸ್ತ್ರೀವಾದಿ ಲೇಖನಗಳನ್ನು ಮೊದಲಿಗೆ ಒಂದು ಕಡೆಯಲ್ಲಿ ಸಂಗ್ರಹಿಸಿ, ಓದುಗರಿಗೆ ಅನುಕೂಲವಾಗಲೆಂದು ಈ ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ.
ಅಸಂಖ್ಯಾತ ಓದುಗರು ಈ ಪುಸ್ತಕವನ್ನು ಬಿಡಿಸುತ್ತಾರೆ ಮತ್ತು ಚಿತ್ತವನ್ನು ಈ ಕಡೆಗೆ ಹರಿಸುತ್ತಾರೆ. ಎಂಬುದು ನಮ್ಮ ನಂಬಿಕೆ, 

ಕಾಮೆಂಟ್‌ಗಳು