ವಿಷಯಕ್ಕೆ ಹೋಗಿ
ಡಾ ಟ.ಡಿ. ರಾಜಣ್ಣ ತಗ್ಗಿ ಅನುವಾದಿಸಿರುವ ನಮ್ಮ ಪ್ರಕಾಶನದ ಹೊಸ ಪುಸ್ತಕ
ಅಪ್ಪಾ....! ನಿನ್ನನು ನೆನೆದು !!
ಅಮ್ಮಾ ನಿನ್ನನು ನೆನೆದು... ಎನ್ನುವುದು ಭಾರತೀಯ ಸಂಸ್ಕೃತಿ. ಆದರೆ ತಂದೆಯನ್ನು ನೆನಪಿಸಿಕೊಂಡು... ಅಪ್ಪನಿಂದ ಆರಂಭಿಸಿ ಆ ಪರಿಕ್ರಮವನ್ನು ತಿಳಿಸುವುದು ಹೊಸ ಸಂಸ್ಕೃತಿ... ಚೆನ್ನಾಗಿದೆ... ತುಂಬ ಸಹಜವಾಗಿದೆ...
....ಭಾರತೀಯ ಇಲ್ಲವೆ ಹೈಂದವ ಸಮಾಜದಲ್ಲಿ ಕನಿಷ್ಠ ನೋಟಕ್ಕೆ ಗುರಿಯಾದ ದಲಿತರ ಬದುಕಿನ ಅದ್ಭುತ ಚಿತ್ರಣವನ್ನು ತೋರಿಸಿಕೊಡುವ ಒಂದು ಜಾತಿಯ ಗಾಥೆ ಇದು...!
ಒಂದೊಂದು ಹನಿ ಹನಿಯಾಗಿ... ಕಣ್ಣೀರು ಸುರಿಸಿ... ವೇದನೆಗಳನ್ನು ಅನುಭವಿಸಿ... ಬಹುದೂರ ಗಮಿಸಿ, ಘನೀಭವಿಸಿ... ತನ್ನ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ, ಸಪ್ತವರ್ಣವಾಗಿ ಬದಲಾದ ವೀರಗಾಥೆ !
...ಒಬ್ಬ ಸಾಮಾನ್ಯನ ಬದುಕಿನ ಚಿತ್ರಣ...!
ಅವಮಾನ ಭಾರದೊಳಗಿಂದ ಆವಿರ್ಭಸಿದ ಹೊಸ ಚಿಗುರು....!
ಓದುತ್ತಾ ಹೋದಂತೆ ಕೆಲವು ಸಲ ನಮಗೇ ಅರಿವಿಲ್ಲದಂತೆ ಕಣ್ಣುಗಳನ್ನು ಒದ್ದೆ ಮಾಡಿಸುತ್ತದೆ... ಮನಸ್ಸು ಮುದುಡುತ್ತದೆ... ಎದೆ ಭಾರವಾಗುತ್ತದೆ... ಹೃದಯ ನಡುಗುತ್ತದೆ... ಮೆದುಳಿಗೆ ಜೋಮು ಹಿಡಿಸುತ್ತದೆ... ಒಂದು ಹಸಿ ನಿಜವನ್ನು ತಿಳಿಸಿ... ಕಟುವಾದ ಕಹಿ ಕಷಾಯವನ್ನು ಕುಡಿಯುತ್ತಿರುವಂತೆ ಮಾಡುತ್ತದೆ. ಈ ಜಾತೀಯತೆಯಲ್ಲಿ... ಆ ಪಾಪದಲ್ಲಿ... ನನ್ನ ಪಾಲು ಕೂಡ ಇರಬಹುದಾ....? ಎಂಬ ಕತ್ತಿಯ ಅಲುಗಿನಂತಹ ಹರಿತವಾದ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲದಿರುವುದು... ಅದು ಹೇಳಿಕೊಳ್ಳಲಾಗದ ಮಾನಸಿಕ ಕ್ಷೋಭೆ...
‘ಅಸ್ಪೃಶ್ಯರು’ ಎಂದು ಕರೆದ ಪ್ರತಿಯೊಂದು ಕಡೆಯೂ ನನಗೆ ನಾಚಿಕೆಯಾಗುತ್ತಿತ್ತು... ಇದನ್ನು ಓದಿದ ಪ್ರತಿ ಸಲವೂ... ಒಂದು ಪ್ರದೇಶದ ಜಾತಿ ನನ್ನ ಭಾರತದ ಸಮಾಜದಿಂದ ಎಷ್ಟು ದೂರವಾಗುತ್ತಿದೆಯೋ.. ನೆನಪಿಸಿಕೊಂಡು ಪಶ್ಚಾತ್ತಾಪಪಟ್ಟು... ಅದು ಪುನರಾವರ್ತನೆ ಆಗಕೂಡದೆಂದು ಅದೆಷ್ಟು ಸಲ ಪ್ರಾರ್ಥನೆ ಮಾಡಿದ್ದೀನೋ...
ನಾನು ಹುಟ್ಟಿ ಬೆಳೆದ ಈ ದೇಶದಲ್ಲಿ... ರಾಜ್ಯದಲ್ಲಿ.... ನನ್ನ ರೈಲ್ವೆ ಕಾಲೋನಿಯಲ್ಲಿ... ನನ್ನ ಎದುರಿಗೇ ನಡೆದ ಅನೇಕ ಘಟನೆಗಳನ್ನು ನೆನಪಿಸಿಕೊಂಡು....! ಒಂದು ಬಗೆಯ ಆನಂದ ಮತ್ತು ಒಂದು ಬಗೆಯ ಬಾಧೆಯನ್ನು ಒಟ್ಟಾಗಿ ಸೇರಿಸಿ... ಅನುಭವಿಸಿದ್ದೇನೆ...!
ಸತ್ಯನಾರಾಯಣ ಅವರು... ಇದರಲ್ಲಿ ಒಂದು ಸತ್ಯದ ದರ್ಶನ ಮಾಡಿಸಿದ್ದಾರೆ.
ಮನುಷ್ಯ ಎನಿಸಿಕೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.... ಮೈ ಫಾದರ್ ಬಾಲಯ್ಯ
ತನಿಕೆಳ್ಳ ಭರಣಿ ಖ್ಯಾತ ತೆಲುಗು ಚಲನಚಿತ್ರ ನಟರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ