ಅಲೆಮಾರಿಯೊಬ್ಬನ ಆತ್ಮಕತೆ....!
ಕನ್ನಡಕ್ಕೆ
ರಾಜಣ್ಣ ತಗ್ಗಿ
ಅಲೆಮಾರಿಗೆ ಸಮುದ್ರ ಯಾನ ಮಾಡುವುದೆಂದರೆ ಪ್ರೀತಿ... ಈ ಹಿಂದೆ ಮಾಡಿದ ಸಮುದ್ರ ಯಾನದಲ್ಲಿ ಸುಮಾರು ಅವಘಡಗಳು ಎದುರಾಗಿದ್ದರೂ ಮತ್ತೆ ಮತ್ತೆ ಪ್ರಯಾಣ ಮಾಡುವುದೆಂದರೆ ಆತನಿಗೆ ಇಷ್ಟವೇ..! ಹಾಗಾಗಿ ಆತ ಎರಡನೇ ಸಲ ಮಹಾಕಾಯರ ದ್ವೀಪಕ್ಕೆ ಹೋಗಬೇಕಾಗುತ್ತದೆ. ಇದೂ ಕೂಡ ಅನಿರೀಕ್ಷಿತವೇ... ಇದರಲ್ಲೂ ಕೂಡ ಮಹಾಕಾಯರಿಗೆ ತಕ್ಕಂತೆ ಅಲ್ಲಿನ ಪ್ರಕೃತಿ ಇರುತ್ತದೆ. ಲಿಲ್ಲಿಪುಟ್‌ಗಳು ಆರು ಅಂಗುಲವಾದರೆ ಇವರು ೬೦ ಅಡಿ ಎತ್ತರದವರು. ಇಲ್ಲಿನ ಅತೀ ಕುಳ್ಳನೆಂದರೆ ೩೦ ಅಡಿ ಎತ್ತರದವನು... ಇಲ್ಲಿನ ಮಹಾಕಾಯರು ಯಾತ್ರಿಕನನ್ನು ಒಬ್ಬ ಲಿಲ್ಲಿಪುಟ್‌ನಂತೆ ಭಾವಿಸುತ್ತಾರೆ... ಮನರಂಜನೆಗೆ ಮತ್ತು ಹಣಸಂಪಾದನೆಗೆ ಆತನನ್ನು ಆಟದ ಬೊಂಬೆಯನ್ನಾಗಿ ಬಳಸಿಕೊಳ್ಳುತ್ತಾರೆ. ಅದೊಂದು ಅಮಾನವೀಯ ಅಂಶ.... ಹಾಗಾಗಿ ಆತನಿಗೆ ಆ ದ್ವೀಪದಲ್ಲಿ ಎದುರಾಗುವುದು ಬರೀ ದುಃಖ ತುಂಬಿದ ನೋವೇ ಹೊರತು ಸಂತಸವಲ್ಲ...! ಈ ದ್ವೀಪದಲ್ಲಿ ಯಾತ್ರಿಕನಿಗೆ ಕನಿಷ್ಠ ಮಾನವೀಯತೆ ತೋರಿಸಿದ ಏಕೈಕ ಜೀವ ಎಂದರೆ ಕ್ಲಾರಾ ಮಾತ್ರ....! ಯಾತ್ರಿಕನು ಅಲ್ಲಿಂದ ಬಿಡುಗಡೆಗೊಳ್ಳುವುದಕ್ಕೆ ಸದಾ ಗೋಗರೆಯುವುದು, ಪರಾರಿಯಾಗುವುದಕ್ಕೆ ಸದಾ ಪ್ರಯತ್ನಿಸುವುದು... ಅದರಲ್ಲಿ ಸೋತು ಅಸಹಾಯಕತೆಯನ್ನು ಪ್ರದರ್ಶಿಸುವುದು ಓದುಗನಲ್ಲಿ ದಯಾರ್ಧ್ರ ಮನಸ್ಥಿತಿಯನ್ನು ತುಂಬುತ್ತದೆ... ಆನಂತರ ಆತ ಯಾವುದೋ ಒಂದು ಹದ್ದಿನ ನೆರವಿನಿಂದ ತಪ್ಪಿಸಿಕೊಳ್ಳುವುದು ಒಂದು ದೊಡ್ಡ ಬಿಡುಗಡೆಯಾಗಿ ಕಾಣಿಸುತ್ತದೆ..
ಇನ್ನು ಮೂರನೆಯ ದ್ವೀಪವಂತೂ ಫ್ಯಾಂಟಸಿಯನ್ನು ಮೀರಿಸುವಂಥದ್ದು...! ಆ ದ್ವೀಪವು ಪಕ್ಷಿಯಂತೆ ಹಾರುತ್ತದೆ. ಅದು ತನ್ನ ಸೂಜಿಗಲ್ಲಿನ ಸಹಾಯದಿಂದ ಬೇಕೆಂದ ಕಡೆಗೆ ಚಲಿಸುತ್ತದೆ. ಬೇಕೆಂದ ಕಡೆ ನಿಲ್ಲುತ್ತದೆ. ಹಾಗಾಗಿ ಈ ದ್ವೀಪವು ಓದುಗನನ್ನು ಕುತೂಹಲದಲ್ಲಿ ಮುಳುಗಿಸಿ, ಅಚ್ಚರಿಯಲ್ಲಿ ತೇಲಿಸುತ್ತದೆ. ಆದರೆ ಈ ಹಾರುವ ದ್ವೀಪವನ್ನು ಆ ದ್ವೀಪವಾಸಿಗಳು ಕೆಳಗಿನ ಜನರಿಗೆ ಮಳೆ, ಬಿಸಿಲು ಸಿಗದಂತೆ ಮಾಡಲು ಈ ದುರ್ಬಳಕೆಗೂ ಬಳಸಿಕೊಂಡಿರುವುದು ಮತ್ತೊಂದು ವಿಶೇಷ...
ಇನ್ನು ಹಾರುವ ದ್ವೀಪವಾಸಿಗಳಲ್ಲದೆ ಕೆಳಗಿನ ನಿಶ್ಚಲ ದ್ವೀಪದಲ್ಲಿ ವಾಸಿಸುವ ಜನರು ತುಂಬ ಮೇಧಾವಿಗಳು. ಆದರೆ ನೀತಿವಂತರಲ್ಲ...! ಅವರಿಗೆ ಜ್ಞಾನವಿದೆ, ಆದರೆ ಇಂಗಿತ ಜ್ಞಾನವಿಲ್ಲ...! ಇಲ್ಲಿನ ಮೇಧಾವಿಗಳು ಹೊಸ ಹೊಸ ಆವಿಷ್ಕಾರಕ್ಕಾಗಿ ಮಾಡುವ ಸಂಶೋಧನೆಗಳಲ್ಲಿ ಕೆಲವು ತುಂಬ ಉಪಯೋಗಕಾರಿ... ಮತ್ತೆ ಕೆಲವು ಬುದ್ಧಿಹೀನರು ಮಾಡುವ ನಿಷ್ಪ್ರಯೋಜಕ ಮತ್ತು ನಿರರ್ಥಕ ಕೆಲಸಗಳು...! ಆದರೆ ಆ ಸಂಶೋಧನೆಗಳ ಬಗ್ಗೆ ಅವರು ಮಂಡಿಸುವ ಬೌದ್ಧಿಕ ವಾದಗಳು ನಿಜಕ್ಕೂ ಬುದ್ಧಿಗೆ ಕಸರತ್ತು ನೀಡುವಂಥವು... ಅಲ್ಲಿನವರು ಎಷ್ಟೇ ಮೇಧಾವಿಗಳಾಗಿದ್ದರೂ ಅತಿ ನಿರಾಶಾವಾದಿಗಳು... ಕೆಲವು ವಿಚಿತ್ರ ಭ್ರಮೆಗಳಿಂದ ತೊಳಲುತ್ತ ಸದಾ ಚಿಂತೆಯಲ್ಲಿ ಕೊರಗುವವರು...! ಹಾಗಾಗಿ ಪರಧ್ಯಾನವೇ ಅವರ ನಿತ್ಯದ ಕೆಲಸ... ಇಲ್ಲಿನ ಇನ್ನೊಂದು ಪ್ರಧಾನ ಅಂಶವೆಂದರೆ ಇಲ್ಲಿನ ಹೆಣ್ಣುಗಳಿಗೆ ವೈವಾಹಿಕ ಬಂಧನವಿದೆ... ಆದರೆ ನೈತಿಕ ಮೌಲ್ಯಗಳಿಲ್ಲ.. ಅವರಿಗೆ ಪಾತಿವ್ರತ್ಯ ಎನ್ನುವುದು ಗೊತ್ತಿಲ್ಲ...! ತನಗೆ ಸಿಕ್ಕ ಗಂಡಸಿನೊಂದಿಗೆ ಕಾಮಕೇಳಿ ನಡೆಸುವುದೇ ಅವರ ಪ್ರಮುಖ ಗುರಿಯಾಗಿರುತ್ತದೆ...!
ಇನ್ನು ನಾಲ್ಕನೇ ದ್ವೀಪ... ಅದೊಂದು ಪ್ರಾಣಿಗಳ ಪ್ರಪಂಚ...! ಅಲ್ಲಿ ಮನುಷ್ಯರ ಸುಳಿವೇ ಇರುವುದಿಲ್ಲ. ಆಕಸ್ಮಿಕವಾಗಿ ಹೋದ ಅಲೆಮಾರಿಯೊಬ್ಬನನ್ನು ಬಿಟ್ಟರೆ ಉಳಿದೆಲ್ಲವೂ ಪ್ರಾಣಿಗಳೇ...! ಆ ದ್ವೀಪದಲ್ಲಿ ಪ್ರಮುಖ ಸ್ಥಾನ ಪಡೆದು ಆಳ್ವಿಕೆ ನಡೆಸುವುದೇ ಹಯಗಳು.. ಅವುಗಳನ್ನು ಹಯನಿಮ್ ಎನ್ನುತ್ತಿದ್ದುದರಿಂದ ಆ ದ್ವೀಪಕ್ಕೆ ಹಯನಿಮ್ ದೇಶ ಎಂದೇ ಹೆಸರು... ಅವು ಮಾತಾಡುವ ಪ್ರಾಣಿಗಳು...! ಹಾಗಾಗಿ ಇಡೀ ಜಗತ್ತಿನ ಎಲ್ಲ ಪ್ರಾಣಿಗಳಲ್ಲಿ ತಮ್ಮದೇ ಶ್ರೇಷ್ಠ ಜಾತಿ ಎಂಬ ಹೆಮ್ಮೆಯಿಂದ ಬೀಗುತ್ತವೆ. ಆದರೆ ಅದು ಅಹಂಕಾರವಲ್ಲ... ಅವುಗಳಲ್ಲಿ ದುಷ್ಟತೆ ಕಾಣಿಸುವುಲ್ಲ. ಅವು ಮಾನವೀಯತೆಯ ಗೆರೆಯನ್ನು ಎಂದೂ ದಾಟುವುದಿಲ್ಲ. ಮೋಸ, ವಂಚನೆ, ಕಪಟ ಎನ್ನುವುದು ಗೊತ್ತಿಲ್ಲದ ಸಾಧುಗಳು...! ಅವುಗಳಲ್ಲಿರುವ ಪ್ರಾಣಿದಯೆ ಮೆಚ್ಚುವಂಥದ್ದು...! ಇಲ್ಲಿ ಕಾಡು ಮನುಷ್ಯನನ್ನು ಹೋಲುವ ನಾಲ್ಕು ಕಾಲಿನ ಪ್ರಾಣಿಗಳಿವೆ... ಅವನ್ನು ಹಯನಿಮ್‌ಗಳು ಯಾಹೂ ಎನ್ನುತ್ತಿದ್ದವು. ಹಾಗಾಗಿ ಈ ಯಾತ್ರಿಕನನ್ನೂ ಯಾಹೂವಿನ ಒಂದು ತಳಿಯೆಂದೇ ಬಗೆದು ಆದರಿಸುವುದು ಈ ಕಾದಂಬರಿಯ ಮತ್ತೊಂದು ವಿಶೇಷವಾಗಿ ಕಾಣಿಸುತ್ತದೆ.
ಈ ನಾಲ್ಕು ಯಾತ್ರೆಗಳೂ ನಾಲ್ಕು ಸಾಂಸ್ಕೃತಿಕ ನಿಧಿಗಳು. ಇವು ಕೆಲವೊಮ್ಮೆ ಜೀವನ ಮೌಲ್ಯಗಳನ್ನು ಬೋಧಿಸುತ್ತವೆ. ಮತ್ತೆ ಕೆಲವೊಮ್ಮೆ ಬೌದ್ಧಿಕ ಕಸರತ್ತನ್ನು ಹೆಚ್ಚಿಸುತ್ತವೆ... ಜೊತೆಗೆ ಮಾನವೀಯತೆ ಎಂದರೇನು ಎಂಬ ಮೌಲಿಕ ಸಂಸ್ಕೃತಿಯನ್ನು ಕಲಿಸುತ್ತವೆ... ಹಾಗೆಯೇ ಕೆಲವೊಮ್ಮೆ ಈ ದ್ವೀಪಗಳು ಭೀಕರವಾಗಿಯೂ ಕಾಣಿಸುತ್ತವೆ...
ಒಟ್ಟಾರೆ ಈ ಕಾದಂಬರಿಯು ಫ್ಯಾಂಟಸಿಯಂತೆ ಕಾಣಿಸಿದರೂ ಅದು ಕೇವಲ ಪ್ಯಾಂಟಸಿ ಮಾತ್ರವಲ್ಲದೆ ಮನುಷ್ಯನ ಎಲ್ಲ ಮುಖಗಳನ್ನು ಪರಿಚಯಿಸುವ ಮತ್ತು ಜಗತ್ತಿನ ಹಲವಾರು ಸಂಸ್ಕೃತಿಗಳನ್ನು ಬಿಂಬಿಸುವ ಕನ್ನಡಿಯೂ ಆಗುತ್ತದೆ....ಇವೆಲ್ಲವೂ ಕಾದಂಬರಿಯ ಪ್ರಧಾನ ಚಾಲಕ ಶಕ್ತಿಗಳು.. ಅವೇ ಈ ಕಾದಂಬರಿಯ ಸ್ವಾರಸ್ಯಕರ ಅಂಶಗಳು ಕೂಡ...!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ