ತೇರೂವೋ

ತೇರೂವೋ
ಕನ್ನಡಕ್ಕೆ: ಚಂದ್ರಕಾಂತ ಪೋಕಳೆ
ಯಾವುದೇ ನಡೆದ ಘಟನೆ, ಮನದೊಳಗೆ ಮೂಡಿದ ಯೋಚನೆ, ಬಿದ್ದ ಕನಸು, ಕಟ್ಟಿದ ಗಾಳಿಗೋಪುರ - ಇಂಥದರ ಕುರಿತು ಏನೇ ಹೇಳಬೇಕೆಂದರೂ ಅದಕ್ಕೊಂದು ಕಾಲಮಿತಿಯ ಚೌಕಟ್ಟು ಸಿದ್ಧಗೊಳ್ಳುತ್ತದೆ. ಅಂಥ ಯಾವ ಕಾರಣವಿಲ್ಲದಿದ್ದರೂ ಅವುಗಳಿಗೊಂದು ಸುಸೂತ್ರತೆ ಪ್ರಾಪ್ತವಾಗುತ್ತದೆ. ಮೊದಲು ಒಂದು, ಅನಂತರ ಮತ್ತೊಂದು ನಡೆಯಿತೆಂಬ ಕ್ರಮಪ್ರಾಪ್ತವಾಗುತ್ತದೆ. ಘಟನೆಗಳು ಜರುಗಿದ ವೈಶಿಷ್ಟ್ಯವು ಅದರೊಳಗೆ ಇಳಿಯುತ್ತದೆ. ಅಂಥದರಲ್ಲೇ ವ್ಯಕ್ತಿಗೆ ಹೆಸರು, ರೂಪ, ಬಣ್ಣ ನೀಡಿದ ಕೂಡಲೇ ಹೇಳುವವನ ಮನದಲ್ಲಿರುವದಕ್ಕಿಂತಲೂ ಭಿನ್ನವಾದ ಆಕೃತಿಯು ಕೇಳುಗನ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಏನೇ ಹೇಳಬೇಕೆಂದರೂ ಇದರಿಂದ ಬಿಡುಗಡೆ ಮಾತ್ರವಿಲ್ಲ.
ಹಾಗೆ ನೋಡಿದರೆ ಭಾಷೆಯೇ ಒಂದು ಕ್ರಮವನ್ನು ಎಲ್ಲ ಬಗೆಯ ಉಚ್ಚಾರದ ಮೇಲೆ ಹೇರುತ್ತಿರುತ್ತದೆ. ಏಕೆಂದರೆ ಒಂದು ವಾಕ್ಯ, ಒಂದು ಪರಿಚ್ಛೇದ, ಒಂದು ಕಥೆ ಎಂದಾಕ್ಷಣ ಅದಕ್ಕೊಂದು ಆರಂಭ, ಮತ್ತು ಮುಕ್ತಾಯ ಇದ್ದೇ ಇರುತ್ತದೆ. ಅದರಿಂದ ಕೆಲವು ಕಳ್ಳಹಾದಿಯನ್ನು ಹುಡುಕುವುದು ಸಾಧ್ಯ. ಆದರೆ ಅದೆಲ್ಲದರ ಮೇಲೆ ಕೃತ್ರಿಮತೆಯ ಮುಳ್ಳು ಬಹಳ. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯ ಕಾಲಮಾನವು ಸರಸರ ಸರಿದುಹೋಯಿತು ಎನ್ನುವುದನ್ನು ತೋರಿಸಲು ವಿರಾಮ ಚಿಹ್ನೆಗಳನ್ನು ಅಥವಾ ಎರಡು ಶಬ್ದಗಳ ನಡುವಣ ಅಂತರವನ್ನೇ ತೆಗೆದು ಹಾಕಬಹುದು. ಅಥವಾ ಇಡೀದಿನ ಬೇಸರದಲ್ಲೇ ಕಳೆಯಿತೆಂದು ಹೇಳಲು, ಅದರಲ್ಲಿಯ ಪ್ರತಿ ನಿಮಿಷವನ್ನೂ ಬಣ್ಣಿಸುತ್ತ ಉದ್ದ ರಾಮಾಯಣವನ್ನೇ ಹೇಳುವದರಿಂದ ಓದುಗನಿಗೂ ಬೇಸರ ಬರಬಹುದು. ಆದರೆ ಹಾಗೆ ಮಾಡುವುದರಿಂದ ಹೇಳಬೇಕಾದ ಕಥೆಯು ದುಸ್ತರ ಮತ್ತು ಜಟಿಲವಾಗುವ ಸಂಭವವೇ ಹೆಚ್ಚು. ನಾವಗಾಂವಿನ ಕಥೆಯೂ ಹಾಗೇ ಆಯಿತು. ಈಗ ನೋಡಿ, ಮಲಠಣ ಎಂಬೂರಿನ ಹರಿಭಾವು ಎಂಬ ವ್ಯಕ್ತಿಯು ಸ್ಫೂರದ್ರೂಪಿ, ಉತ್ಸಾಹೀ, ನಗೆಮೊಗದ ರಸಿಕನಾಗಿರಬಾರದು ಎಂದಿದೆಯೇ? ಆದರೆ ನಾನು ಹೀಗೆಲ್ಲ ಹೇಳಿದರೆ ಯಾರೂ ನಂಬುವುದಿಲ್ಲ. ಮೇಲಿನ ವರ್ಣನೆಯು ಮುಂಬೈಯಲ್ಲಿರುವ ಅಮಿತಾಭ ಎಂಬ ವ್ಯಕ್ತಿಗೋ ಅಥವಾ ಕಲ್ಕತ್ತ-ಡೆಲ್ಲಿ-ಪುಣೆಯಲ್ಲಿರುವ ವ್ಯಕ್ತಿಗೋ ಅನ್ವಯಿಸುತ್ತದೆ ಎಂದೇ ಭಾವಿಸುತ್ತಾರೆ. ಹಾಗಾದರೆ ಇದೆಲ್ಲ ಏನು? ಅಂದರೆ ಮಲಠಣದಲ್ಲಿರುವ ಹರಿಭಾವು ಎಂಬ ವ್ಯಕ್ತಿಯು ನನ್ನ ಪರಿಚಯದವನು ಎಂದಲ್ಲ. ಸುಮ್ಮನೆ ಇದೊಂದು ಉದಾಹರಣೆಯಾಗಿ ಬಳಸಿದೆ ಅಷ್ಟೇ.
ಆಗ ಏನು ಮಾಡಬೇಕು? ಹೇಳುವ ವ್ಯಕ್ತಿಗೆ ನಾವು ನಾನು ಎನ್ನಬಹುದು. ಅಂದರೆ ಈ ನಾನು ಮತ್ತು ಲೇಖಖಿ ನಾನು ಇಬ್ಬರೂ ಒಂದೇ ಎಂಬ ನಿರರ್ಥಕವಾದ ನಿರ್ಣಯವನ್ನು ಯಾರಾದರೂ ನೀಡಿದರೆ ಅಂಥ ಯಾವ ವ್ಯತ್ಯಾಸವೂ ಆಗದು. ಆದರೆ ಉಳಿದವರ ಗತಿಯೇನು? ಅವರನ್ನು ಅ,ಬ,ಕ, ಎಂದು ಕರೆಯುವದರಿಂದ ರಸಭಂಗವಾಗುವುದರ ಹೊರತು ಮತ್ತೇನೂ ಸಾಧಿಸಿದಂತಾಗುವುದಿಲ್ಲ. ಈ ಕಾದಂಬರಿಯ ಪಾತ್ರಗಳೆಲ್ಲ ಕಾಲ್ಪನಿಕ, ಅದು ಯಾವುದೇ ಜೀವಂತ ವ್ಯಕ್ತಿಗೆ ಹೋಲುತ್ತಿದ್ದರೆ ಅದನ್ನು ಯೋಗಾಯೋಗವೆಂದು ಭಾವಿಸಬೇಕು - ಎಂದು ಟಿಪ್ಪಣಿ ನೀಡುವ ಮಾತು ಹುಸಿತನದ್ದಾಗುತ್ತದೆ. ಕೊನೆಗೆ ಸ್ಥಳ, ಕಾಲ, ಹೆಸರು ಮುಂತಾದ ಅನುಕೂಲಗಳ ಬೆನ್ನು ಹತ್ತ ಬೇಕಾಗುತ್ತದೆ. ಈ ಘಟನೆಯು ಎಲ್ಲಿ, ಎಂದು, ಯಾರ ಬಗೆಗೆ ಜರುಗಿತೆಂದು ಹೇಳಬೇಕಾಗುತ್ತದೆ. ಪ್ರಾಯಶಃ ಅದು ನಾನು ಅಥವಾ ನಾನು ಅನುಭವಿಸಿದ್ದಾಗಿರ ಬಹುದು ಅಥವಾ ಬೇರೆ ಯಾರೋ ಅನುಭವಿಸಿದ್ದಾಗಿರಬಹುದು. ಆದರೆ ಆ ಅನುಭವದ ಕುರಿತು ಹೇಳುವ ಶಬ್ದಸಂಪತ್ತು ಕೇವಲ ಬದುಕಿನ ಒಂದು ಆಲೇಖವೆಂದು ಭಾವಿಸಬಾರದು.

ಕಾಮೆಂಟ್‌ಗಳು