ಪ್ರೀತಿಯ ನಲವತ್ತು ನಿಯಮಗಳು

ಧಾರ್ಮಿಕ ಮೂಲಭೂತವಾದಗಳು ನಮ್ಮ ಜಗತ್ತುಗಳನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ಮಾತನಾಡುವುದು ಅತ್ಯವಶ್ಯ ಅನ್ನಿಸುತ್ತಿದ್ದಾಗಲೇ ಘಟಿಸಿದ್ದ್ದು ‘ಪ್ರೀತಿಯ ನಲವತ್ತು ನಿಯಮಗಳು’.
ಇತ್ತೀಚೆಗೆ ಪ್ರಪಂಚದಾದ್ಯಂತ ಹಬ್ಬಿ ಹರಡುತ್ತಿರುವ ಧಾರ್ಮಿಕ ಮೂಲಭೂತವಾದದ ಬಿಸಿ ಎಲ್ಲಾ ದೇಶ, ಎಲ್ಲಾ ಧರ್ಮಗಳ ಎಲ್ಲಾ ಗಡಿಗಳನ್ನೂ ಮೀರಿ ಇಂದು ಚಲಾವಣೆಯಲ್ಲಿ ಕಂಡುಬರುತ್ತಿದೆ. ಅದರಲ್ಲೂ ವಿಷೇಶವಾಗಿ ಭಾರತದಲ್ಲಂತೂ ಸಾಂಕ್ರಾಮಿಕದ ಹಾಗೆ ಹಬ್ಬುತ್ತಿರುವ ಧಾರ್ಮಿಕ ಮೂಲಭೂತವಾದದ ಪಿಡುಗು ಯಾರು ಏನನ್ನು ತಿನ್ನಬೇಕು, ಯಾವ ರೀತಿಯ ಬಟ್ಟೆಯನ್ನು ತೊಡಬೇಕು, ಯಾರನ್ನು ಪ್ರೀತಿಸಬೇಕು, ಮದುವೆ ಯಾರನ್ನು ಆಗಬೇಕು, ನಮ್ಮವರು ಯಾರು, ಯಾರು ಇತರರು, ಯಾರ ಜೊತೆ ಕಾಣಿಸಿಕೊಳ್ಳಬೇಕು, ಓಡಾಡ ಬೇಕು, ಒಡನಾಡಬೇಕು, ಆಡಬೇಕಾದ್ದು ಏನನ್ನು, ಆಡಬಾರದ್ದು ಏನೇನನ್ನು, ಯಾವ ಭಾಷಾ ಸಾಹಿತ್ಯ ಯಾವ ಧರ್ಮದ ಜೊತೆಗೆ ಸಮೀಕರಣಗೊಳ್ಳಬೇಕು, ಏನ ಬರೆದರೆ ಮುಟ್ಟುಗೋಲು, ಏನನ್ನಾಡಿದರೆ ತಲೆದಂಡ ಎಂಬ ಪೂರ್ವಾಗ್ರಹಗಳು ಇನ್ನೆಂದಿಗಿಂತಲೂ ಹೆಚ್ಚಾಗಿ ಈಗ ಕಾಣಿಸಿ ಕೊಳ್ಳುತ್ತಿದ್ದು, ಮೂಲಭೂತ ಹಕ್ಕುಗಳನ್ನೇ ಹತ್ತಿಕ್ಕುವ ಸಾಹಸಗಳು ಈ ಪ್ರಜಾಸತ್ತಾತ್ಮಕ ನಾಡಿನಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿರುವಂತೆ ಅನ್ನಿಸುತ್ತಿದೆ. ರಾಷ್ಟ್ರಪ್ರೇಮದ ಅಳತೆಗೋಲುಗಳು ಅಳೆದಳೆದು ಉದ್ದಗಲ, ಜಗ್ಗಿಬಿಟ್ಟಿವೆ ವಿಶ್ವಾಸದ,. ಪ್ರೀತಿಯ ಹಾಗೂ ನಂಬಿಕೆಯ ನೆಲೆಗಳನ್ನು. ಈ ಎಲ್ಲ ಅಹವಾಲುಗಳಿಗೂ ಸ್ಪಂದಿಸುವ ತಾಣವೇನೋ ಎಂಬಂತ  ನನಗೆ ಸಿಕ್ಕಿತು. 

ಕಾಮೆಂಟ್‌ಗಳು